   ಮೂಲದೊಡನೆ ಪರಿಶೀಲಿಸಿ

ಆಲ್ಲಿಯಂ
	ಲಲ್ಲಿಯೇಸಿ ಕುಟುಂಬಕ್ಕೆ ಸೇರಿದ ಸಸ್ಯಜಾತಿ. ಇದರಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಸೀಮೆ ಈರುಳ್ಳಿ ಮುಂತಾದ ಮುಖ್ಯ ವಾಣಿಜ್ಯ ಬೆಳೆಗಳು ಸೇರಿವೆ. ಆಲ್ಲಿಯಂನಲ್ಲಿ 500 ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಸುಂದರವಾದ ಹೂಬಿಟ್ಟು ಅಲಂಕಾರವಾಗಿ ಕಾಣುವುದರಿಂದ ಅವನ್ನು ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಆಲ್ಲಿಯಂ ಸಸ್ಯಗಳನ್ನು ಅಂಚು ಪೊದೆಗಳ ಪಕ್ಕದಲ್ಲಿ ತುಂಬುಸಸ್ಯಗಳಾಗಿಯೂ ಕಲ್ಲೇರಿ ಸಸ್ಯಗಳಾಗಿಯೂ ಬೆಳೆಸುತ್ತಾರೆ. ಇವುಗಳ ಹೂಗಳ ಬಣ್ಣ ಬಿಳುಪು, ಗುಲಾಬಿ, ನೀಲಿ, ಕಡುಗೆಂಪು ಮತ್ತು ನಸುಗೆಂಪು. ಕೆಲವು ಪ್ರಭೇದಗಳಲ್ಲಿ ಮಿಶ್ರ ಬಣ್ಣಗಳೂ ವಿವಿಧ ಆಕಾರ ಮತ್ತು ಗಾತ್ರಗಳೂ ಇವೆ. ಹೀಗಾಗಿ ಇ ಪ್ರಭೇದಗಳು ಅತ್ಯಾಕರ್ಷಕವಾಗಿ ತೋರುತ್ತವೆ.
ಬೇಸಾಯದಲ್ಲಿರುವ ಆಲ್ಲಯಂ ಸಸ್ಯಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಕೆಳಗೆ ಕಾಣಿಸಿದೆ. ವಿವರಗಳಿಗೆ 
 ಸಸ್ಯದ ಹೆಸರು 
 ಬೆಳೆಯುವ ಎತ್ತರ (ಅಡಿಗಳಲ್ಲಿ) 
 ಹೂವಿನ ಬಣ್ಣ

 ಆಲ್ಲಿಯಂ ಅಲ್ಟೊಪಿಲೊಸಿಂ 
ಆ. ಅಜುರೆಯಂ 
ಆ. ಜೈಗ್ಯಾಂಸಿಯಂ 
 
ಆ. ಕರಟವಿನ್ಸ 
ಆ. ಮೊಲ್ಲಿ 
ಆ. ನೆಪಲಿಟನಂ 
ಆ. ಅಸ್ಟ್ರೊಸ್ಕಿನಂ 
2
2
5

2
1
2
1
 ಊದಾ 
ನೀಲಿ 
ಊದಾ ಅಥವಾ ಊದಾ ಮತ್ತು ಗುಲಾಬಿ ಮಿಶ್ರಿತ. ನಸುಗೆಂಪು 
ಕಡುಹಳದಿ 
ಬಿಳಿ 
ಗುಲಾಬಿ

 
ಆಲ್ಲಿಯಂ ಜಾತಿಯ ಸಸ್ಯಗಳನ್ನು ಬೀಜ ಮತ್ತು ಲಶುನಗಳಿಂದ ಯಶಸ್ವಿಯಾಗಿ ವೃದ್ಧಿ ಮಾಡಬಹುದು. ಬೇಸಾಯದ ಕಾಲ ಜಾತಿಗಳನ್ನು ಅನುಸರಿಸಿದೆ. ಸಾಮಾನ್ಯವಾಗಿ ಅಕ್ಟೋಬರ್-ನವಂಬರ್ ತಿಂಗಳಲ್ಲಿ ನೆಟ್ಟ ಸಸಿಗಳ ಮೇ-ಜೂನ್ ತಿಂಗಳಲ್ಲಿ ಹೂ ಬಿಡುತ್ತವೆ. ಲಶುನಗಳನ್ನು ನೆಡುವುದು ಹೆಚ್ಚು ಬಳಕೆಯಲ್ಲಿದೆ. ಅವನ್ನು 3” ಆಳ 4”-6” ಅಂತರದಲ್ಲಿ ನೆಡಬೇಕು. ಸಾಮಾನ್ಯವಾಗಿ ಹೆಚ್ಚು ಎತ್ತರದ ಪ್ರದೇಶಗಳಲ್ಲಿ ಸಮೃದ್ಧಿಯಾಗಿ ಬೆಳೆಸಬಹುದು. ಮರಳು ಗೋಡು ಮಣ್ಣು ಇವುಗಳ ಬೇಸಾಯಕ್ಕೆ ಶ್ರೇಷ್ಠವಾದದ್ದು. 										
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ